ಚಿತ್ರಗುಪ್ತ ದೇವಾಲಯವು ಭಾರತದ ಮಧ್ಯ ಪ್ರದೇಶ ರಾಜ್ಯದ ಖಜುರಾಹೊ ಪಟ್ಟಣದಲ್ಲಿ ಸ್ಥಿತವಾಗಿರುವ ೧೧ ನೇ ಶತಮಾನದ ಸೂರ್ಯ ದೇವಾಲಯವಾಗಿದೆ. ವಾಸ್ತುಕಲಾರೀತ್ಯ ಇದು ಹತ್ತಿರದ ಜಗದಂಬಿ ದೇವಾಲಯವನ್ನು ಬಹಳವಾಗಿ ಹೋಲುತ್ತದೆ. ಶಾಸನ ಸಾಕ್ಷ್ಯಾಧಾರಗಳನ್ನು ಆಧರಿಸಿ, ದೇವಾಲಯದ ನಿರ್ಮಾಣದ ಕಾಲಮಾನವು ಕ್ರಿ.ಶ. 1020-1025 ಎಂದು ನಿರ್ಧರಿಸಬಹುದು. ಪ್ರಾಯಶಃ ಇದನ್ನು 23 ಫ಼ೆಬ್ರುವರಿ 1023 ರಂದು, ಮಹಾ ಶಿವರಾತ್ರಿಯ ಸಂದರ್ಭದಂದು ಪವಿತ್ರೀಕರಿಸಲಾಯಿತು. ಇದು ಪ್ರದಕ್ಷಿಣಾ ಪಥವಿರುವ ಒಂದು ಒಳಕೋಣೆ, ಮುಖಮಂಟಪ, ಬಾಹುಗಳಿರುವ ಮಹಾಮಂಟಪ, ಮತ್ತು ಒಂದು ಪ್ರವೇಶದ್ವಾರ ಮಂಟಪವನ್ನು ಹೊಂದಿದೆ. ದೊಡ್ಡ ಹಜಾರವು ಅಷ್ಟಕೋನಾಕೃತಿಯ ಛಾವಣಿಯನ್ನು ಹೊಂದಿದ್ದು ಜಗದಂಬಿ ದೇವಾಲಯದಲ್ಲಿನ ಅನುಗುಣವಾದ ಛಾವಣಿಗಿಂತ ಹೆಚ್ಚು ಅಲಂಕೃತವಾಗಿದೆ. == ಚಿತ್ರಗಳು == == ಉಲ್ಲೇಖಗಳು == == ಗ್ರಂಥಸೂಚಿ ==